Samadhanadha Prabhu Song Lyrics Kannada | ಸಮಧಾನದ ಪ್ರಭು Song Lyrics

Christians Lyrics

ಸಮಧಾನದ ಪ್ರಭು Song Lyrics


 ಮೇಲಣ ಲೋಕದಿ ಮಹಿಮೆಯು

ಭೂಮಿಯ ನರರಲ್ಲಿ ಸಮಧಾನವೂ

ನಿನ್ನಿಂದ ನಿನ್ನಿಂದ


ಕತ್ತಲೆ ಕವಿದಿದ್ದ ಈ ಭೂಮಿಗೆ

ರಕ್ಷಣೆಯೂ ನಿರೀಕ್ಷೆಯೂ

ನಿನ್ನಿಂದ ನಿನ್ನಿಂದ

 

ಸಮಧಾನದ ಪ್ರಭುವೇ ಆಲೋಚನಾಕರ್ತನೆ

ನಿತ್ಯನಾದ ತಂದೆಯೇ 

ನ್ನಿನ್ ಆರಾಧಿಸುವೆ

ಇಮ್ಮಾನುವೇಲನೆ 

ಜೊತೆಯಲ್ಲೇ ಇರುವಾತನೆ

ಪರಲೋಕವ ತ್ಯಜಿಸಿ ಧರೆಗಿಳಿದೆ ನೀ


 ಪರದ ಸಿಂಹಾಸನರೂಡನು

ನಮ್ಮಯ ಹೃದಯದಿ 

ತಂಗಿರುವನು ಎಂದಿಗೂ


ನೀತಿಯ ಸೂರ್ಯನು ನಮ್ಮ ಮಧ್ಯ ಉದಿಸಿದನು

ರಮಣೀಯನು ನನಗಾಗಿಯೇ

ಧರಣಿಲಿ ಬರಿದಾದನು


ಯಾರು ನಶಿಸೋಗಬಾರದೆಂದು

ನಿನ್ ಪ್ರೀತಿಯ ತನಯನ ಅರ್ಪಿಸಿದೆ

ನಮಗಾಗಿ ಯೆಹೋವನೆ

 

ಯಾಕಿಷ್ಟು ನನ್ನ ಪ್ರೀತಿಸಿದೆ

ನಿನ್ ಸುತನನ್ನೇ ನನಗಾಗಿ ಅರ್ಪಿಸಿದೆ

ನನ್ ಪಾಪವೆಲ್ಲಾ ಅಳಿಸಿ

ಪುತಪಡಿಸಿದೆ

To Top